ಹನುಮಾನ್ ಚಾಲೀಸಾ ಜಲ-ಜಪ ಧ್ಯಾನ-ದೀಕ್ಷೆ :

 

ಹನುಮಾನ್ ಒಬ್ಬ ವ್ಯಕ್ತಿ ಮಾತ್ರವಲ್ಲ, ಅದೊಂದು ತತ್ವ. ಸ್ವಾಮಿ ಹನುಮ ಕರುನಾಡಿನ ಆಧ್ಯಾತ್ಮಿಕ ರಾಯಭಾರಿ(Spiritual Icon). ಹನುಮನುದಿಸಿದ ನಾಡು ಕರುನಾಡು ಎಂದಿದ್ದಾರೆ ಮೇರು-ಕವಿ ಡಿ. ವಿ. ಜಿ. ಯವರು.

 

ಹನುಮ ಕಲಿಯುಗದ ದೈವ, ಕಲಿಯುಗ ಬ್ರಹ್ಮ ಎಂದಿದ್ದಾರೆ ಪರಾಶರ ಮುನಿಗಳು. ಕಲಿಯುಗದವರು ತಮ್ಮೆಲ್ಲ ದುಃಖ-ದಾರಿದ್ರ್ಯಗಳಿಂದ, ಕಷ್ಟ-ಕಾರ್ಪಣ್ಯಗಳಿಂದ, ವ್ಯಥೆ-ವ್ಯಾಕುಲತೆಗಳಿಂದ, ಸಾಲದ ಶೂಲದಿಂದ, ಭವ-ಬಂಧನಗಳಿಂದ ಮುಕ್ತರಾಗಲು ಆಂಜನೇಯನನ್ನು ಸ್ಮರಿಸುವುದು ಲೇಸು ಎಂದು ಪರಾಶರ ಮುನಿಗಳು ಹೇಳಿದ್ದಾರೆ.

 

ಮಹಿಳೆಯರಿಗಾಗಿ 21 ದಿನ(ಅರ್ಧ-ಮಂಡಲ), ಪುರುಷರಿಗಾಗಿ 48 ದಿನ(ಪೂರ್ಣ ಮಂಡಲ) ಸಾಧನಾ ದೀಕ್ಷೆ ಕೊಡಲಾಗುವುದು. ಹನುಮಾನ್ ಚಾಲೀಸಾ ಜಲ-ಜಪ-ಧ್ಯಾನ ದೀಕ್ಷೆಯನ್ನು ಪಡೆದು ಸಕಾರಾತ್ಮಕ ಹೃನ್ಮನಾತ್ಮ ಶರೀರಗಳ ಬೆಸುಗೆಯಿಂದ, ಭವಬಂಧನಗಳ ದಾಸ್ಯದಿಂದ ಹೊರಬಂದು ಆತ್ಮೋದ್ದಾರದ ಮಾರ್ಗವನ್ನು ಆಧರಿಸಿ ವಿಶ್ವವಂದ್ಯರಾಗಬಹುದು.

Deeksha:

ದೀಕ್ಷಾ

ದೀಕ್ಷಾ ಎಂಬ ಸಂಸ್ಕೃತ ಶಬ್ದದ ಅರ್ಥ – ಅಂತರ್ದೃಷ್ಟಿಗೆ-ಅಂತರ್ಯಾನಕ್ಕೆ ಚಾಲನೆ ಕೊಡುವುದು ಎಂದರ್ಥ. (Providing the vision to see the path of inner journey) ದ+ಈಕ್ಷಾ=ದೀಕ್ಷಾ. ದ=ಕೊಡುವುದು, ಈಕ್ಷಾ=ಅಂತರ್ದೃಷ್ಟಿ. ಅರ್ಥಾತ್ ಆತ್ಮದರ್ಶನ, ಆತ್ಮಸಾಕ್ಷಾತ್ಕಾರದ ಸಾಧನವಾದ ಅಂತಃಚಕ್ಷುವಿನ ತೆರೆಯುವಿಕೆಗೆ ಚಾಲನೆ ಕೊಡುವುದು ಎಂದರ್ಥ. ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ನಮ್ಮಲ್ಲಿ ನೂರಾರು ದೀಕ್ಷಾ ಪದ್ಧತಿಗಳು ರೂಢಿಯಲ್ಲಿವೆ, ಇವುಗಳಲ್ಲಿ ಐದು ದೀಕ್ಷಾ ಪದ್ಧತಿಗಳು ಜನಪ್ರಿಯವೆನಿಸಿವೆ. 

  • ವಾಕ್ ದೀಕ್ಷಾ
  • ಸ್ಪರ್ಶ ದೀಕ್ಷಾ
  • ಸಮಯ ದೀಕ್ಷಾ
  • ಮನೋ ದೀಕ್ಷಾ
  • ಶಾಂಭವಿ ದೀಕ್ಷಾ

ವ್ಯಕ್ತಿಗಳ ವಯೋ, ಮನೋ, ಬುದ್ಧಿ, ಭಾವ ಪ್ರಕೃತಿಗಳಿಗನುಸಾರ ಅನುಭಾವಿ ಗುರುಗಳು ಅವರುಗಳಿಗೆ ಹೊಂದುವಂತಹ ದೀಕ್ಷೆಯನ್ನು ನಿಶ್ಚಯಿಸಿ ಕೊಡುತ್ತಾರೆ. “ಗುರು” ಎಂದರೆ ಅಜ್ಞಾನ ಎನ್ನುವ ಅಂಧಕಾರವನ್ನು ಅಳಿಸಿ ಸುಜ್ಞಾನ ಎನ್ನುವ ಜ್ಞಾನ ದೀವಿಗೆಯನ್ನು ಬೆಳಗಿಸುವ ತತ್ವ. ಬೆಳಗುತ್ತಿರುವ ಮೊಂಬತ್ತಿಯೊಂದು ಬೆಳಗಲು ಅರ್ಹತೆಯಿದ್ದರೂ ಬೆಳಗದಿರುವ ಇನ್ನೊಂದು ಮೊಂಬತ್ತಿಗೆ ಅಗ್ನಿ ಸ್ಪರ್ಶ ನೀಡಿ ಬೆಳಗುವಂತೆ ಮಾಡುವ ಪ್ರಕ್ರಿಯೆಯೇ “ದೀಕ್ಷೆ”. ವಿದ್ಯುತ್ ಬಲ್ಬು ಬೆಳಗಲು ಸ್ವಿಚ್ ಆನ್ ಮಾಡುವಂತಹ ಸಂಗತಿಯೇ ದೀಕ್ಷೆ(Deeksha is an induction process to spark or to ignite the wisdom which leads to enlightenment).

Get In Touch

ADDRESS
Madderi, Vemagal, Karnataka 563128
EMAIL ID
team@hanumalaya.org
PHONE NUMBER
+ 91 7353535301
+ 91 7353535306
OPENING HOURS
Mon – Sat 9 am to 6 pm  
Sun – 10 am to 5 pm

Online Courses

To Attend online courses click and enroll.